   ಮೂಲದೊಡನೆ ಪರಿಶೀಲಿಸಿ

ಕರುಳುಹುಳು ರೋಧಕಗಳು

   ಮನುಷ್ಯ, ಹಂದಿ, ಕುದುರೆ, ನಾಯಿ, ದನಗಳಲ್ಲಿ ಸಾಮಾನ್ಯವಾಗಿ ಉಪಜೀವಿಗಳಾಗಿ ಸೇರಿಕೊಂಡು ಬೆಳೆಯುತ್ತಿರುವ ಜಂತುಹುಳುಗಳು ಮತ್ತಿತರ ಪರಪಿಂಡಿಗಳನ್ನು ಹೋಗಲಾಡಿಸಲು ಬಳಸುವ ಮದ್ದುಗಳಿವು (ಏಂಟ್ ಹೆಲ್ಮಿಂಟಿಕ್ಸ್).

   ಈ ಹುಳುಗಳು ಅಂಗಗಳಲ್ಲಿ ಸೇರಿದ್ದರೆ ತಲೆನೋವು, ದುರ್ಬಲತೆ, ರಕ್ತಕೊರೆ, ಚರ್ಮರೋಗಗಳು, ಶ್ವಾಸರೋಗಗಳು, ಜ್ವರ, ಅಜೀರ್ಣ, ಹೊಟ್ಟೆನೋವು, ಗಂತಿಗಳು ಮುಂತಾದುವು ಕಾಣಿಸಿಕೋಳ್ಳುತ್ತವೆ. ಪ್ರಪಂಚದಲ್ಲಿ ಪ್ರಾಯಶ: 50%ರಷ್ಟು ಜನರು ಈ ಹುಳುರೋಗಗಳಿಂದ ತೊಂದರೆ ಪಡುತ್ತಿದ್ದಾರೆ. ಮುಖ್ಯವಾಗಿ ಬಡತನ, ಅವಿದ್ಯೆ, ಜೌಗುಪ್ರದೇಶ, ಕೊಳಕುತನ, ಶುದ್ಧವಾದ ನೀರು ಸರಬರಾಜು ಇಲ್ಲದಿರುವುದೇ ಇದರ ಕಾರಣಗಳು.

  ಈ ಪಟ್ಟಿಯಲ್ಲಿ ಔಷಧಿಗಳನ್ನು ಮತ್ತು ಪ್ರಮಾಣಗಳನ್ನು ನಿರೂಪಿಸಿದೆ.

ಉಪಜೀವಿ
ರೋಗ 
ಮುಖ್ಯವಾಗಿ
ಉಪಯೋಗಿಸುವ
ಔಷಧಿ
ಪ್ರಮಾಣ ದಿನಕ್ಕೆ

ಚಪ್ಪಟೆ ಹುಳುಗಳು
ಲಾಡೀ ಹುಳುಗಳು
(ಅ) ಟೀನಿಯಾ ಸೋಲಿಯಂ
(ಆ) ಟೀನಿಯಾ ಸ್ಯಾಜಿನೇಟ

ಲಾಡೀ ಹುಳು ರೋಗ
 1 ಮೆಪಕ್ರಿನ್

2 ನಿಕ್ಲೋಸಮೈಡ್
1 ಗ್ರಾಂ ದೊಡ್ಡವರಿಗೆ

1 ಗ್ರಾಂ ದೊಡ್ಡವರಿಗೆ

0.5 ಗ್ರಾಂ ಮಕ್ಕಳಿಗೆ

ಜಂತು ಹುಳುಗಳು
ಅಸ್ಕಾರಿಸ್ ಲಂಬ್ರಿ
ಕಾಯಿಡಿಸ್
ಕೊಕ್ಕೆ ಹುಳು

ಸೂಜಿ ಹುಳು

ಕೊಕ್ಕೆ ಹುಳು ರೋಗ

ಸೂಜಿ ಹುಳು

ಬೇನೆ

1 ಪೈಪರಿಜೀನ್
2 ಬಿಫಾನಿಯಂ
 3 ಸ್ಯಾಂಟೋನಿಸ್
1 ಟೆಟ್ರಕ್ಲೋರ್ ಎಥಿಲೀನ್
2 ಬಿಫಾನಿಯಂ
 3 ಥಿಯಬೆಂಡಿಯ
ಜೋಲ್

1 ಕ್ರಸ್ಟಲ್ ವೈಯೆಲೆಟ್
 2 ಪೈಪರಜೀನ್
3 ಪೈರ್‍ವೈನಿಯಮ್
ಪಾಮೊಯೇಟ್
4-5 ಗ್ರಾಂ
5 ಗ್ರಾಂ
0.06-0.2 ಗ್ರಾಂ
1-4 ಮಿ.ಲೀ.
5 ಗ್ರಾಂ

0.01-0.03 ಗ್ರಾಂ

1-2 ಗ್ರಾಂ
0.25 ಗ್ರಾಂ

ಮುತ್ತುಗದ ಹಸಿರಾದ ಎಲೆ ಮತ್ತು ಬೀಜ, ಪರಂಗಿಯ ಹಣ್ಣು ಮತ್ತು ಅದರಿಂದ ಬರುವ ಹಾಲು, ಬಾಳೆದಿಂಡು ಮತ್ತು ಅದರ ಹೂವು, ಕೆಸವಿನ ದಂಟುಗಳನ್ನು ಮನೆಗಳಲ್ಲಿ ಜಂತುಹುಳುರೋಧಕಳಾಗಿ ಬಳಸುತ್ತಾರೆ.

   ಈ ಹುಳುರೋಧಕಗಳು ಬೇರೆ ಬೇರೆ ರೀತಿಯಾದ ಕ್ರಿಯೆಗಳಿಂದ ಆ ಹುಳುಗಳನ್ನು ಕರುಳಿನಿಂದ ನಿರ್ಮೂಲಮಾಡುತ್ತವೆ. ಹುಳುಗಳಲ್ಲಿರುವ ಕೋಲೀನ್ ಎಸ್ಟರೇಸ್ ಎಂಬ ಅಜೈವಿಕ ಕಿಣ್ವದ ಮೇಲೆ ಪೈಪರ್ ಜೀನ್ ಕೆಲಸಮಾಡಿ ಸ್ನಾಯುಗಳು ದುರ್ಬಲತೆಯನ್ನುಂಟುಮಾಡಿ ಹುಳುಗಳನ್ನು ನಿರ್ಮೂಲಮಾಡುತ್ತದೆ. ಕೆಲವು ಮದ್ದುಗಳು ಆಹುಳುಗಳ ಉಪಾಪಚಯ (ಮೆಟಬಾಲಿಸಂ) ಮೇಲೆ ವರ್ತಿಸಿ ಅವನ್ನು ಸಾಯಿಸುತ್ತವೆ. ಬೇರೆ ಕೆಲವು ಮದ್ದುಗಳು ಆ ಹುಳುಗಳ ಪಿಸಿತೊಗಲಿನ (ಕ್ಯೂಟಿಕಲ್) ಮೇಲೆ ವರ್ತಿಸಿ, ಆ ಹುಳುಗಳು ಕರುಳುಗಳಲ್ಲಿಯೇ ಜೀರ್ಣವಾಗುವಂತೆ ಮಾಡುತ್ತವೆ.

ಹುಳುರೋಧಕಗಳ ಸೇವನೆಯ ಮೊದಲು ತಿಳಿಯಬೇಕಾದ ಸಾಮಾನ್ಯ ನಿಯಮಗಳು: ಮದ್ದನ್ನು ಬರಿಯ ಹೊಟ್ಟೆಯಲ್ಲಿ ಸೇವಿಸಬೇಕು. ಆ ಔಷಧಿಗಳನ್ನು 3-4ಬಾರಿ, 15 ಮಿನಿಟುಗಳ ಅಂತರದಲ್ಲಿ ಸೇವೀಸಬೇಕು. ಹುಳುರೋಧಕಗಳನ್ನು ಸೇವಿಸಿದ ಮೇಲೆ (ಸರಿಯಾದ, ಬೇಕಾದಷ್ಟು ವಯಸ್ಸಿಗೆ ತಕ್ಕಂತೆ ಪ್ರಮಾಣದಲ್ಲಿ) ವಿರೇಚನ ಔಷಧಿಯನ್ನು ಕುಡಿಯಬೇಕು. ಹರಳೆಣ್ಣೆಯನ್ನು ಸೇವಿಸಕೂಡದು. ಹಿಟ್ಟಿನ ಪದಾರ್ಥ ಅಥವಾ ಸಕ್ಕರೆಯನ್ನು ವಿಶೇಷವಾಗಿ ತಿನ್ನಬೇಕು. ವಿಸರ್ಜನೆಯಾದ ಮಲದಲ್ಲಿ ಹುಳುಗಳಾಗಲಿ ಅವುಗಳ ಮೊಟ್ಟೆಗಳಿಗಾಗಲಿ ಇವೆಯೇ ಎಂದು ಪರೀಕ್ಷಿಸ ಬೇಕು.

ಹುಳುರೋಧಕಗಳ ಹೆಚ್ಚು ಸೇವನೆಯಿಂದ ಓಕರಿಕೆ, ವಾಂತಿಭೇದಿ, ಹೊಟ್ಟೆ ನೋವು, ತಲೇ ತಿರುಗು, ದುರ್ಬಲತೆ, ಅಗ್ನಿಮಾಂದ್ಯ, ಅನ್ನ ಸೇರದಿರುವುದು, ಸ್ನಾಯುಗಳ ಸರಿಯಾದ ಹೊಂದಾಣಿಕೆ ಕ್ರಿಯೆ ಇಲ್ಲದಿರುವುದು, ದೃಷ್ಟಿಯ ತೊಂದರೆಗಳು, ತಲೆನೊವು, ಪಿತವತಜನಕಾಂಗ, ಶ್ವಾಸಕೋಶದ ರೋಗಗಳು, ಮಂಕಾಗಿರುವಿಕೆಯೇ ಮುಂತಾದ ದುರ್ಗುಣಗಳು ಉಂಟಾಗುತ್ತವೆ.

(ಎಸ್.ಕೆ.ಎಚ್.; ಎಂ.ಎಸ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ